
ಪೀ ಠಿ ಕೆ :
ರಾಜ್ಯದ ಸಂಪನ್ಮೂಲಗಳನ್ನು ಹೆಚ್ಚಿಸಿ ಜನ ಸಾಮಾನ್ಯರಲ್ಲಿ ಜೀವನದ ಅವಶ್ಯಕತೆಗಾಗಿ ಸ್ಪಂದಿಸುವಲ್ಲಿ ರಾಜ್ಯದ ಸಹಕಾರ ಬ್ಯಾಂಕಗುಳ ಪಾತ್ರವು ದೊಡ್ಡದು ಮತ್ತು ಅಮೂಲ್ಯ ಹೊಣೆಗಾರಿಕೆಯಿಂದ ಕೂಡಿರುತ್ತದೆ. ಆದರಲ್ಲೂ ನಮ್ಮ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತುಂಬಾ ಜನಸಾಮಾನ್ಯರಲ್ಲಿ ಸಹಕಾರ ಪ್ರವೃತ್ತಿ ಭಾವನೆಯನ್ನು ಔಚಿತ್ಯಾ ಪೂರ್ಣವಾಗಿ ಸಮಾಜದ ಎಲ್ಲಾ ರಂಗಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಒಂದು ಹಣಕಾಸಿನ ಸಂಸ್ಥೆಯಾಗಿದೆ.
ಸ್ಥಾಪನೆ :
ಈ ನಮ್ಮ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ದಿನಾಂಕ 12.12.1920 ರಂದು ಸ್ಥಾಪನೆಗೊಂಡಿದ್ದು, ಇದರ ಪವರ್ತಕರು ಸನ್ಮಾನ್ಯ ದಿವಂಗತ ಶ್ರೀ ಅಸುಂಡಿ ಭೀಮರಾವ ಇವರು ಪ್ರಪ್ರಥಮ ಸಂಸ್ಥಾಪಕ ಅಧ್ಯಕ್ಷರಾಗಿ ದಿನಾಂಕ 22.12.1920 ರಿಂದ 07.11.1925ರ ವರೆಗೆ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು.
DICGC logo and QR code

Crop Loan
Housing Loan
Gold Loan
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 24ನೇ ಶಾಸನಬದ್ಧ ಪರಿಶೀಲನೆಗೆ ಆಗಮಿಸಿರುವ ನಬಾರ್ಡ್ (NABARD) ಅಧಿಕಾರಿಗಳಾದ ಶ್ರೀಯುತ ವೆಂಕಟ್ ಪ್ರಣಿತ ಮನೆಪಲ್ಲಿ ಹಾಗೂ ಶ್ರೀಯುತ ದೀಪಕ್ ಅವರನ್ನು ಬ್ಯಾಂಕಿನ ಅಧ್ಯಕ್ಷರಾದ ಮಾನ್ಯ ಶ್ರೀ ಕೆ. ತಿಪ್ಪೇಸ್ವಾಮಿ ಅವರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.
ಅಪೆಕ್ಸ್ ಬ್ಯಾಂಕಿನ 2025–26ನೇ ಸಾಲಿನ ಮಹಾಜನ ಸಭೆಯಲ್ಲಿ ಬಿ ವರ್ಗದ ವಿಭಾಗದಲ್ಲಿ ಬಳ್ಳಾರಿ ಡಿಸಿಸಿ ಬ್ಯಾಂಕ್ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಸ್ವೀಕರಿಸಿತು.
ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ರವಿ ಎಸ್. ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಶರಣಗೌಡ ಬಯ್ಯಾಪುರ ಅವರನ್ನು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ತಿಪ್ಪೇಸ್ವಾಮಿ ಹಾಗೂ ನಿರ್ದೇಶಕರಾದ ಚಂದ್ರಯ್ಯಸ್ವಾಮಿ, ಮೂಕಯ್ಯಸ್ವಾಮಿ, ನವೀನಕುಮಾರ ರೆಡ್ಡಿ ಹಾಗೂ ಸಹಕಾರಿ ಮುಖಂಡರು , ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದನೆಗಳನ್ನು ಸಲ್ಲಿಸಿದರು.
Reccuring Deposit
Fixed Deposit
Pigmy Deposites


